ರಾಜಕೀಯ



ಧರ್ಮವೆಂದರೆ ಜೀವನ ವಿಧಾನ

ರಾಜಕೀಯ | 21 Nov 2017 03:41 pm
ಧರ್ಮವೆಂದರೆ ಜೀವನ ವಿಧಾನ ಭಾರತದ ಮಣ್ಣಿನ ಕಣಗಳಲ್ಲಿ ಧರ್ಮ, ಸಂಸ್ಕೃತಿ, ಪರಂಪರೆಯ ಬೇರುಗಳು ಆಳವಾಗಿ ಬೆಳೆದು ಭದ್ರಗೊಂಡಿವೆ. ಭಾರತೀಯರು ದೇವರನ್ನು ಪ್ರೀತಿಸುವ ವಿಚಾರ ವಿಶ್ವತೋಮುಖಗೊಂಡಿದೆ. ಭಾರತೀಯರು ದೇವರನ್ನು ಪ್ರೀತಿಸುತ್ತಾರೆ; ಅದಕ್ಕೆ ನಾವು ಭಾರತೀಯರನ್ನು ಪ್ರೀತಿಸುತ್ತೇವೆ ಎಂಬ ಜರ್ಮನ್‌ ದೇಶದ ಮಗು ನಮ್ಮ ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್‌ ಅವರಿಗೆ ಹೇಳಿದ ಮಾತು ಇಲ್ಲಿ ಉಲ್ಲೇಖನೀಯ.

ಧರ್ಮ, ದೇವರು, ಧರ್ಮಾಚರಣೆ, ಧರ್ಮ ಪರಂಪರೆಗಳನ್ನು ಭಾವನಾತ್ಮಕ ಸಂಬಂಧದ ಮುಕ್ತ ನೆಲೆಯಲ್ಲಿ ಸ್ವೀಕರಿಸಿದಾಗ ಅನುಭಾವದ ಅನುಭೂತಿ ಗೋಚರವಾಗುತ್ತದೆ. ಭಗವಂತನೊಂದಿಗೆ ನಡೆಸುವ ನಿತ್ಯದ ಅನುಸಂಧಾನದಲ್ಲಿ ಚಿದೆºಳಗನ್ನು ಕಾಣುವುದೂ ಸಹ ಧರ್ಮ ಸಂಸ್ಕಾರದ ನೆರಳಿನಲ್ಲಿಯೇ ನಡೆಯುತ್ತದೆ. ವಿಶ್ವದ ಪ್ರಮುಖ ಧರ್ಮಗಳಲ್ಲಿ ಒಂದಾಗಿರುವ ಹಿಂದೂ ಧರ್ಮವು ಅತ್ಯಂತ ಪ್ರಾಚೀನ ಧರ್ಮ ಪರಂಪರೆಯನ್ನು ಒಳಗೊಂಡಿದೆ.

ಅದಕ್ಕೆಂದೇ ಹಿಂದೂ ಧರ್ಮ ಸನಾತನ ಧರ್ಮಗಳ ಮೇರು ಪಂಕ್ತಿಯಲ್ಲಿ ಸ್ಥಾನ ಪಡೆದಿದೆ. ಹಿಂದೂ ಧರ್ಮದ ತವರು...

ಕುಖ್ಯಾತ ಸರಣಿ ಹಂತಕ, ಕಲ್ಟ್ ಲೀಡರ್‌ ಮ್ಯಾನ್‌ಸನ್‌ ಇನಿಲ್ಲ

ರಾಜಕೀಯ | 20 Nov 2017 05:08 pm
ಕುಖ್ಯಾತ ಸರಣಿ ಹಂತಕ, ಕಲ್ಟ್ ಲೀಡರ್‌ ಮ್ಯಾನ್‌ಸನ್‌ ಇನಿಲ್ಲ ವಾಷಿಂಗ್ಟನ್‌ : ತನ್ನ ಯುವ ಹಿಂಬಾಲಕರನ್ನು ಮುಂದಿಟ್ಟುಕೊಂಡು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 1960ರ ದಶಕದ ಕೊನೆಯಲ್ಲಿ ಸರಣಿ ಹತ್ಯೆಗಳನ್ನು ನಡೆಸಿ ಜನ ಸಮೂಹದಲ್ಲಿದ್ದ ಶಾಂತಿ ಮತ್ತು ಪ್ರೀತಿಯ ಮೌಲ್ಯಗಳನ್ನು ಹೊಸಕಿ ಹಾಕಿ ಜನರ ನಿದ್ದೆಗೆಡಿಸಿದ್ದ ಕ್ರೂರ ಕಂಗಳ ಕುಖ್ಯಾತ ಸರಣಿ ಹಂತಕ, ಕಲ್ಟ್ ಲೀಡರ್‌, ಚಾರ್ಲ್ಸ್‌ ಮ್ಯಾನ್‌ಸನ್‌ ತನ್ನ 83ರ ಹರೆಯದಲ್ಲಿ ಮೃತಪಟ್ಟನೆಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ಧಕ್ಯ ಸಹಜ ದೈಹಿಕ ತೊಂದರೆಗಳಿಂದ ಬಳಲುತ್ತಿದ್ದ ಮ್ಯಾನ್‌ಸನ್‌ ನಿನ್ನೆ ಭಾನುವಾರ ಸಂಜೆ ಕರ್ನ್ ಕೌಂಟಿ ಆಸ್ಪತ್ರೆಯಲ್ಲಿ ಮೃತಪಟ್ಟನೆಂದು ಕ್ಯಾಲಿಫೋರ್ನಿಯದ ಅಪರಾಧಿಗಳ ಸುಧಾರಣಾ ಮತ್ತು ಪುನರ್‌ವಸತಿ ಇಲಾಖೆ ತಿಳಿಸಿದೆ. ಆದರೆ ಮ್ಯಾನ್‌ಸನ್‌ ಸಾವಿನ ಸನ್ನಿವೇಶಗಳ ವಿವರಗಳನ್ನು ಅದು ಬಹಿರಂಗಪಡಿಸಿಲ್ಲ.

ಮ್ಯಾನ್‌ಸನ್‌ ಸಮೀಪದ ಕಾರ್ಕೋರಾನ್‌ ರಾಜ್ಯ ಬಂಧೀಖಾನೆಯಲ್ಲಿ ಜೀವಾವಧಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದ. ನಟಿ ಶ್ಯಾರನ್‌ ಟೇಟ್‌ ಸೇರಿದಂತೆ 9...

6 ವರ್ಷ ಮಾಡಿದ್ನಲ್ಲಾ.. ಬಿಜೆಪಿಯವರಿಗೆ ಹೊಟ್ಟೆಕಿಚ್ಚು

ರಾಜಕೀಯ | 20 Nov 2017 03:30 pm
6 ವರ್ಷ ಮಾಡಿದ್ನಲ್ಲಾ.. ಬಿಜೆಪಿಯವರಿಗೆ ಹೊಟ್ಟೆಕಿಚ್ಚು ಮಂಡ್ಯ: 'ಸಿದ್ದರಾಮಯ್ಯ 5 ವರ್ಷ ಆಡಳಿತ ಪೂರೈಸಿದ್ದಾನಲ್ಲ
ಎಂದು ಬಿಜೆಪಿ ನಾಯಕರಿಗೆ ಹೊಟ್ಟೆಕಿಚ್ಚು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾಗಮಂಗಲದಲ್ಲಿ ಕಾಂಗ್ರೆಸ್‌ ಸಮಾವೇಶವನ್ನುದ್ದೇಶಿಸಿ ಮಾತನಾಡಿದ

ಸಿಎಂ 'ಈಶ್ವರಪ್ಪ ಇದ್ದಾನೆ ಅವ ಬುದ್ದಿ ಹೀನ, ಯಡಿಯೂರಪ್ಪ ಅಂತ ಇದ್ದಾನೆ ಅವನೂ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಇದ್ದಾನೆ ಅವನಿಗೆ ಹೇಗೆ
ಮಾತನಾಡಬೇಕೆಂಬುದೇ ಗೊತ್ತಿಲ್ಲ, ಪಾರ್ಲಿಮೆಂಟರಿ ಲ್ಯಾಂಗ್ವೇಜ್‌ ಗೊತ್ತಿಲ್ಲ. ಅನಾಗರಿಕ ಮಾತುಗಳನ್ನಾಡುತ್ತಾನೆ' ಎಂದರು. 'ಬಿಜೆಪಿಯವರು ಹೀಗೆ ಮಾತನಾಡುವುದು ಯಾಕೆ ಗೊತ್ತಾ ? ಅವರಿಗೆ ಹೊಟ್ಟೆಕಿಚ್ಚು . ಸಿದ್ದರಾಮಯ್ಯ 5 ವರ್ಷ ಆಡಳಿತ ಪೂರ್ಣ ಮಾಡಿದನಲ್ಲಾ ಎಂದು. ಅವರ ಹೊಟ್ಟೆ ಕಿಚ್ಚು

ಅವರನ್ನೇ ಸುಡುತ್ತದೆ. ನನಗೆ ರಾಜ್ಯದ ಜನ ಆಶೀರ್ವಾದ ಮಾಡುತ್ತಾರೆ'ಎಂದರು. 'ನಾನು ಬಿಜೆಪಿ ನಾಯಕರ ಮಟ್ಟಕ್ಕೆ...
First « 1 »Last

Other News :

keyboard_arrow_right ಡಿ.9ರಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಆನೇಕಲ್ ಗೆ keyboard_arrow_right ಆನೇಕಲ್ ಪಟ್ಟಣದಲ್ಲಿ ಡಿ.9ರಂದು ಹಲವು ಕಾಮಗಾರಿಗಳಿಗೆ ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯರವರು ಚಾಲನೆ ನೀಡಲಿದ್ದು ಅದರ ಪೂರಕವಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ keyboard_arrow_right ಆನೇಕಲ್ ವಿದಾನ ಸಭಾ ಕ್ಷೇತ್ರದ ಅತ್ತಿಬೆಲೆಯ ಜಯಭಾರತಿ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು keyboard_arrow_right ಧರ್ಮವೆಂದರೆ ಜೀವನ ವಿಧಾನ keyboard_arrow_right "ಕಾಲ್ನಡಿಗೆ ಮೂಲಕ ಬಂದು ದೇವರ ದರ್ಶನ ಪಡೆದ ರಾಮಸಾಗರ ಗ್ರಾಮಸ್ಥರು" ವೈಕುಂಠ ಏಕಾದಶಿ ಅಂಗವಾಗಿ ಆನೇಕಲ್ ವಿಧಾನ ಸಭಾ ಕ್ಷೇತ್ರದ ರಾಮಕೃಷ್ಣಾಪುರದ ಪ್ರಸನ್ನ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು. keyboard_arrow_right ಡಿಸೆಂಬರ್ 24 ಮತ್ತು 25ರಂದು ಆನೇಕಲ್ ವಿಧಾನ ಸಭಾ ಕ್ಷೇತ್ರದ ಚಂದಾಪುರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ನಗರ ಜಿಲ್ಲೆ ವತಿಯಿಂದ 12 ನೇ ಕನ್ನಡ ಸಾಹಿತ್ಯ ಸಮ್ಮೇಳವನ್ನು ಆಯೋಜಿಸಲಾಗಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ನವೀನ್ ಕುಮಾರ್ ಬಾಬು ತಿಳಿಸಿದ್ದಾರೆ keyboard_arrow_right ಚಲವಾದಿ ವೆಂಕಟೇಶ್ ರವರ ನೇತೃತ್ವದಲ್ಲಿ ಅದ್ದೂರಿಯಾಗಿ ಹನುಮ ಜಯಂತಿ ಉತ್ಸವ ಅದ್ದೂರಿಯಾಗಿ ನೆರವೇರಿತು keyboard_arrow_right ಆನೇಕಲ್ ವಿದಾನ ಸಭಾ ಕ್ಷೇತ್ರದ ದೊಮ್ಮಸಂದ್ರದಲ್ಲಿ ದೊಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ್ ಬಾಬು ರವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಶುಚಿತ್ವದ ಬಗ್ಗೆ ಜಾಗೃತಿ ಶಿಭಿರ ಆಯೋಜಿಸಲಾಗಿತ್ತು