ಧರ್ಮವೆಂದರೆ ಜೀವನ ವಿಧಾನ

ರಾಜಕೀಯ | 21 Nov 2017 03:41 pm
ಧರ್ಮವೆಂದರೆ ಜೀವನ ವಿಧಾನ ಭಾರತದ ಮಣ್ಣಿನ ಕಣಗಳಲ್ಲಿ ಧರ್ಮ, ಸಂಸ್ಕೃತಿ, ಪರಂಪರೆಯ ಬೇರುಗಳು ಆಳವಾಗಿ ಬೆಳೆದು ಭದ್ರಗೊಂಡಿವೆ. ಭಾರತೀಯರು ದೇವರನ್ನು ಪ್ರೀತಿಸುವ ವಿಚಾರ ವಿಶ್ವತೋಮುಖಗೊಂಡಿದೆ. ಭಾರತೀಯರು ದೇವರನ್ನು ಪ್ರೀತಿಸುತ್ತಾರೆ; ಅದಕ್ಕೆ ನಾವು ಭಾರತೀಯರನ್ನು ಪ್ರೀತಿಸುತ್ತೇವೆ ಎಂಬ ಜರ್ಮನ್‌ ದೇಶದ ಮಗು ನಮ್ಮ ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್‌ ಅವರಿಗೆ ಹೇಳಿದ ಮಾತು ಇಲ್ಲಿ ಉಲ್ಲೇಖನೀಯ.

ಧರ್ಮ, ದೇವರು, ಧರ್ಮಾಚರಣೆ, ಧರ್ಮ ಪರಂಪರೆಗಳನ್ನು ಭಾವನಾತ್ಮಕ ಸಂಬಂಧದ ಮುಕ್ತ ನೆಲೆಯಲ್ಲಿ ಸ್ವೀಕರಿಸಿದಾಗ ಅನುಭಾವದ ಅನುಭೂತಿ ಗೋಚರವಾಗುತ್ತದೆ. ಭಗವಂತನೊಂದಿಗೆ ನಡೆಸುವ ನಿತ್ಯದ ಅನುಸಂಧಾನದಲ್ಲಿ ಚಿದೆºಳಗನ್ನು ಕಾಣುವುದೂ ಸಹ ಧರ್ಮ ಸಂಸ್ಕಾರದ ನೆರಳಿನಲ್ಲಿಯೇ ನಡೆಯುತ್ತದೆ. ವಿಶ್ವದ ಪ್ರಮುಖ ಧರ್ಮಗಳಲ್ಲಿ ಒಂದಾಗಿರುವ ಹಿಂದೂ ಧರ್ಮವು ಅತ್ಯಂತ ಪ್ರಾಚೀನ ಧರ್ಮ ಪರಂಪರೆಯನ್ನು ಒಳಗೊಂಡಿದೆ.

ಅದಕ್ಕೆಂದೇ ಹಿಂದೂ ಧರ್ಮ ಸನಾತನ ಧರ್ಮಗಳ ಮೇರು ಪಂಕ್ತಿಯಲ್ಲಿ ಸ್ಥಾನ ಪಡೆದಿದೆ. ಹಿಂದೂ ಧರ್ಮದ ತವರು ಮನೆಯಂತಿರುವ ಭಾರತದಲ್ಲಿ ಹಿಂದೂ ಸಂಸ್ಕೃತಿ, ಆಚರಣೆ ಹಾಗೂ ಪರಂಪರೆಯ ವಿದ್ಯಮಾನಗಳು ವ್ಯಾಪಕವಾಗಿ ಹರಡಿಕೊಂಡಿವೆ. ಅದಕ್ಕೆಂದೇ ಭಾರತವು ಹಿಂದೂಸ್ಥಾನ ಎಂದೂ ಅತಿ ಹೆಚ್ಚು ಪ್ರಸಿದಿಟಛಿ ಪಡೆದುಕೊಂಡಿದೆ. ಪ್ರತಿಯೊಬ್ಬ ಹಿಂದೂವೂ ಸಹ ವೇದಗಳನ್ನು ಹಿಂದೂ ಧರ್ಮದ ಆಧಾರವೆಂದು ನಂಬಿ ಗೌರವಿಸುತ್ತಾನಾದ್ದರಿಂದ ಹಿಂದೂ ಧರ್ಮವನ್ನು ವೈದಿಕ ಧರ್ಮ ಹಾಗೂ ವೇದಾಂತ ಧರ್ಮ ಎಂದೂ ಕರೆಯುವ ರೂಢಿ ಇದೆ.

ಧರ್ಮವೆಂದರೆ ಬೇರೇನೂ ಅಲ್ಲ, ಅದು ನಮ್ಮ ಜೀವನ ವಿಧಾನ. ಧರ್ಮವು ನಮ್ಮ ನಡತೆಗೆ ಸಂಬಂಧಿಸಿದೆ. ಸತ್ಯ-ಶುದಟಛಿ ಸಂಸ್ಕಾರದೊಂದಿಗೆ ಎಲ್ಲರನ್ನೂ ಸರಿಯಾದ ದಾರಿಯಲ್ಲಿ ಮುನ್ನಡೆಸಿ ಬದುಕನ್ನು ಉತ್ತಮಗೊಳಿಸುವ ಕೃಪಾಶಕ್ತಿಯೇ ಧರ್ಮ. ಹಿಂದೂ ಧರ್ಮವೆಂದರೆ ತತ್ವಗಳಿಂದ ಕೂಡಿರುವ ಶಾಸOಉವೂ ಹೌದು, ಜೀವನ ಕ್ರಮವೂ ಹೌದು. ಹಿಂದೂ ಧರ್ಮವು ಸನಾತನ ಧರ್ಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಯಾವುದು ವಿಶ್ವವ್ಯಾಪಿಯಾಗಿ ಶಾಶ್ವತ ವಸ್ತುವಿನ ಜ್ಞಾನವನ್ನು ಹರಡುವುದೋ ಅದು ಸನಾತನ ಧರ್ಮ ಎಂದೆನಿಸಿಕೊಳ್ಳುತ್ತದೆ. ಅದು ಅನಾದಿ, ಅನಂತ ಹಾಗೂ ನಿತ್ಯಶಾಶ್ವತ ಧರ್ಮ. ಯಾರು ಧರ್ಮವನ್ನು ನಂಬಿ ಅದರ ಆಚರಣೆಗಳ ನೆಲೆಯಲ್ಲಿ ಬದುಕನ್ನು ನಿರ್ವಹಿಸುತ್ತಾರೋ, ಅವರನ್ನು ಸಂಸಾರ ಬಂಧದಿಂದ ಮುಕ್ತಗೊಳಿಸಿ ಬಯಲಗಳಿಕೆಯ ಶಾಶ್ವತ ಬೆಳಗನ್ನು ತುಂಬುವಲ್ಲಿ ಸನಾತನ ಧರ್ಮವು ಮಾರ್ಗದರ್ಶನ ಮಾಡುತ್ತದೆ.

ಆಧ್ಯಾತ್ಮ ಬದುಕಿನ ಆರಂಭಿಕ ಹಂತದಿಂದ ಅಂತ್ಯದಲ್ಲಿ ನಡೆಯುವ ನಿರ್ವಿಕಲ್ಪ ಸಮಾಧಿ ಸ್ಥಿತಿಯವರೆಗಿನ ವಿವಿಧ ಹಂತಗಳ ಸಾಧಕರು, ಪ್ರಚಾರಕರು, ಪ್ರತಿಪಾದಕರನ್ನು ಹಿಂದೂ ಧರ್ಮವು ತನ್ನ ವಿಶಾಲ ಆಶ್ರಯದಲ್ಲಿ ಸೇರಿಸಿಕೊಂಡಿದೆ. ಸತ್ಯದ ಬೆಳಕಿನಲ್ಲಿ ತಮ್ಮ ಅಭಿಪ್ರಾಯಗಳನ್ನು ಪ್ರತಿಪಾದಿಸಿ ಧನ್ಯರಾಗಲು ಇಲ್ಲಿ ಸಂಪೂರ್ಣ ಸ್ವಾತಂತ್ರ್ಯ ಹಾಗೂ ಸದವಕಾಶಗಳಿವೆ.

ಸಹಸ್ರಾರು ಸಂವತ್ಸರಗಳಿಂದ ಹಿಂದೂ ಧರ್ಮವು ಅನೇಕ ವಿಧದ ವೈರುಧ್ಯಗಳನ್ನು, ದಾಳಿಗಳನ್ನು ಸಹಿಸಿಕೊಂಡು ಎದುರಿಸಿ ಪ್ರಸಂಗಾವಧಾನ ಪ್ರವಾಹದ ವಿರುದಟಛಿವೂ ಈಜಿ ದಡ ಸೇರಿ ಸಂಪೂರ್ಣ ಚೈತನ್ಯಯುಕ್ತವಾಗಿ ಇಂದಿಗೂ ಉಳಿದು ಬೆಳೆದು ಬಂದಿದೆ. ದೇವರು-ಪ್ರಪಂಚ, ಜಗತ್ತು-ಮಾನವ, ಜನನ-ಮರಣ, ಸುಖ-ದುಃಖ ಇತ್ಯಾದಿ ಜೀವನ ವಿಧಾನದ ವಿಚಾರಗಳಿಗೆ ನಿರಂತರ ಬೆಳಕು ಚೆಲ್ಲಿ ಮನುಕುಲದ ಬದುಕು ಮಹೋನ್ನತ

ಸಾಧನೆಯಾದ ಸಾûಾತ್ಕಾರ ಸಂಪಾದನೆಗೆ ತೆರೆದುಕೊಳ್ಳುವಂತೆ ಮಾಡುವ ವಿಶಿಷ್ಟ ಶಕ್ತಿಸಂಚಯ ಹಿಂದೂ ಧರ್ಮದಲ್ಲಿದೆ. ಉಡುಪಿಯಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳ ಹಿರಿತನದಲ್ಲಿ ನವೆಂಬರ್‌ 24, 25 ಹಾಗೂ 26ರಂದು ಆಯೋಜನೆಗೊಂಡಿರುವ ಧರ್ಮ ಸಂಸದ್‌ ಹಿಂದೂಧರ್ಮದ ವಿಭಿನ್ನ ನೆಲೆ ಮೂಲಗಳ ಮೌಲಿಕ ಅಂಶಗಳತ್ತ ಬೆಳಕು ಚೆಲ್ಲಲಿದೆ.

ಆ ಮೂಲಕ ನಮ್ಮ ಭಾರತೀಯ ನೆಲದ ಧರ್ಮ, ಸಂಸ್ಕೃತಿ, ಪರಂಪರೆ ಮತ್ತು ಆಚರಣೆಗಳು ಇನ್ನಷ್ಟು, ಮತ್ತಷ್ಟು ಬಲಗೊಳ್ಳಲಿವೆ. ಪರಮ ದಯಾಳು ಪಾರ್ವತಿ- ಪರಮೇಶ್ವರರು, ಜಗದಾದಿ ಜಗದ್ಗುರು ಶ್ರೀ ರೇಣುಕಾದಿ ಪಂಚಾಚಾರ್ಯರು ನಾಡಿನ ಸಮಸ್ತ ಜನತೆಗೆ ಆಯುರಾರೋಗ್ಯ ಭಾಗ್ಯ, ಸುಖ, ಸಂಪದಗಳನ್ನು ಕರುಣಿಸಲೆಂದು ಹೃದಯ ತುಂಬಿ ಹಾರೈಸುತ್ತೇವೆ.
-ಡಾ. ಪ್ರಸನ್ನ ರೇಣುಕ ವೀರಸೋಮೇಶ್ವರ, ಶಿವಾಚಾರ್ಯ ಭಗವತ್ಪಾದರು,
ಶ್ರೀ ರಂಭಾಪುರಿ ಜಗದ್ಗುರುಗಳು, ಬಾಳೆಹೊನ್ನೂರು


Read more at https://www.udayavani.com/kannada/news/state-news/253053/religion-is-the-way-of-life#pbbQ7Ms9VdS7z0ig.99

Other News :

keyboard_arrow_right ಆನೇಕಲ್ ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ವಿಶ್ವ ಅಂಗವಿಕಲರ ದಿನಾಚರಣೆಯನ್ನು ಆಚರಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮುನಿರತ್ನಮ್ಮ ನಾರಾಯಣಪ್ಪ ಮತ್ತು ಅಧಿಕಾರಿಗಳು ಹಾಜರಿದ್ದರು keyboard_arrow_right ಚಲವಾದಿ ವೆಂಕಟೇಶ್ ರವರ ನೇತೃತ್ವದಲ್ಲಿ ಅದ್ದೂರಿಯಾಗಿ ಹನುಮ ಜಯಂತಿ ಉತ್ಸವ ಅದ್ದೂರಿಯಾಗಿ ನೆರವೇರಿತು keyboard_arrow_right ಆನೇಕಲ್ ವಿದಾನ ಸಭಾ ಕ್ಷೇತ್ರದ ಸಬ್ ಮಂಗಲ ಗ್ರಾಮದಲ್ಲಿ ಅದ್ದೂರಿಯಾಗಿ ನೆರವೇರಿಸಿದರು ಹನುಮ ಜಯಂತಿ ಉತ್ಸವ keyboard_arrow_right ಆನೇಕಲ್ ವಿದಾನ ಸಭಾ ಕ್ಷೇತ್ರದ ಚಂದಾಪುರದ ಬಿಜೆಪಿ ಕಚೇರಿ ಆವರಣದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಪೂರ್ವ ಭಾವಿ ಸಭೆ ಆಯೋಜಿಸಲಾಗಿತ್ತು keyboard_arrow_right ಧರ್ಮವೆಂದರೆ ಜೀವನ ವಿಧಾನ keyboard_arrow_right ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಕೊಂಡ ಶಾಸಕ ಸತೀಶ್ ರೆಡ್ಡಿ keyboard_arrow_right ಕುಖ್ಯಾತ ಸರಣಿ ಹಂತಕ, ಕಲ್ಟ್ ಲೀಡರ್‌ ಮ್ಯಾನ್‌ಸನ್‌ ಇನಿಲ್ಲ keyboard_arrow_right ಐದನೇ ಮುಂಬೈ ಮಹಾಯಾತ್ರೆಗೆ ಕರ್ನಾಟಕ ರಿಪಬ್ಲಿಕನ್ ಸೇನೆಯ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಚಾಲನೆ

Related News :

ಕುಖ್ಯಾತ ಸರಣಿ ಹಂತಕ, ಕಲ್ಟ್ ಲೀಡರ್‌ ಮ್ಯಾನ್‌ಸನ್‌ ಇನಿಲ್ಲ

Posted @ 20 Nov 2017, 05:08 pm
ವಾಷಿಂಗ್ಟನ್‌ : ತನ್ನ ಯುವ ಹಿಂಬಾಲಕರನ್ನು ಮುಂದಿಟ್ಟುಕೊಂಡು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 1960ರ ದಶಕದ ಕೊನೆಯಲ್ಲಿ ಸರಣಿ ಹತ್ಯೆಗಳನ್ನು ನಡೆಸಿ ಜನ ಸಮೂಹದಲ್ಲಿದ್ದ ಶಾಂತಿ ಮತ್ತು ಪ್ರೀತಿಯ ಮೌಲ್ಯಗಳನ್ನು ಹೊಸಕಿ ಹಾಕಿ ಜನರ ನಿದ್ದೆಗೆಡಿಸಿದ್ದ ಕ್ರೂರ ಕಂಗಳ ಕುಖ್ಯಾತ ಸರಣಿ ಹಂತಕ, ಕಲ್ಟ್...

6 ವರ್ಷ ಮಾಡಿದ್ನಲ್ಲಾ.. ಬಿಜೆಪಿಯವರಿಗೆ ಹೊಟ್ಟೆಕಿಚ್ಚು

Posted @ 20 Nov 2017, 03:30 pm
ಮಂಡ್ಯ: 'ಸಿದ್ದರಾಮಯ್ಯ 5 ವರ್ಷ ಆಡಳಿತ ಪೂರೈಸಿದ್ದಾನಲ್ಲ ಎಂದು ಬಿಜೆಪಿ ನಾಯಕರಿಗೆ ಹೊಟ್ಟೆಕಿಚ್ಚು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾಗಮಂಗಲದಲ್ಲಿ ಕಾಂಗ್ರೆಸ್‌ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಸಿಎಂ 'ಈಶ್ವರಪ್ಪ ಇದ್ದಾನೆ ಅವ ಬುದ್ದಿ ಹೀನ, ಯಡಿಯೂರಪ್ಪ ಅಂತ ಇದ್ದಾನೆ...