ಸಿದ್ದಾಂತವಿಲ್ಲದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಜನತೆ ಮತನೀಡಿ ಮತವನ್ನು ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜಣ್ಣ ಆರೋಪಿಸಿದರು.
ಸ್ಥಳೀಯ ಸುದ್ದಿ
| 02 Dec 2017 06:03 pm

ಆನೇಕಲ್. ಡಿ. 02- ಸಿದ್ದಾಂತವಿಲ್ಲದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಜನತೆ ಮತನೀಡಿ ಮತವನ್ನು ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜಣ್ಣ ಆರೋಪಿಸಿದರು.
ಅವರು ಪಟ್ಟಣದ ಸೌಭಾಗ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬಡಜನರ ಅಭಿವೃದ್ದಿ ಬೇಕಾಗಿಲ್ಲ, ಬಡ ಜನರ ರಕ್ತವನ್ನು ಕುಡಿದು ಅಧಿಕಾರದ ಸಾಮಾಜ್ಯವನ್ನು ನಿರ್ಮಿಸಲು ಹೊರಟಿದ್ದು ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಈ ರಾಜ್ಯದ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರವರೇ ಎಂದು ಅವರು ಹೇಳುವ ಮೂಲಕ ಬೇರೆ ಜಾತಿಗಳನ್ನು ಬಲಿಪಶು ಮಾಡಲು ಸಿದ್ದರಾಮಯ್ಯರವರು ಹೊರಟಿದ್ದಾರೆ, ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಎಸ್ಸಿ ಜನಾಂಗದವರನ್ನು ಉಪಮುಖ್ಯ ಮಂತ್ರಿ ಮಾಡುವುದಾಗಿ ಕುಮಾರಣ್ಣ ಈಗಾಗಲೇ ಘೋಷಣೆ ಮಾಡಿದ್ದು ಕಾಂಗ್ರೆಸ್ ಹಾಗೂ ಬಿಜೆಪಿಯವರಿಗೆ ತಾಕತ್ ಇದ್ದರೆ ಘೋಷಣೆ ಮಾಡಲಿ ಎಂದು ಸವಾಲೆಸೆದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಕೆ.ಪಿ.ರಾಜುರವರು ಆನೇಕಲ್ ಕ್ಷೇತ್ರದಲ್ಲಿ ಗೆದ್ದು, ಕುಮಾರಣ್ಣರವರ ಸಕರ್ಾರದಲ್ಲಿ 2 ಸಾವಿರ ಕೋಟಿ ಗೂ ಹೆಚ್ಚು ಅನುಧಾನವನ್ನು ಆನೇಕಲ್ ಕ್ಷೇತ್ರದ ಅಭಿವೃದ್ದಿಗೆ ತಂದೇ ತರುತ್ತಾರೆ ಎಂದು ಹೇಳಿದರು.
ಜೆಡಿಎಸ್ನ ಮಹಾ ಪ್ರಧಾನ ಕಾರ್ಯದರ್ಶಿ ಆರ್.ದೇವರಾಜ್ ಮಾತನಾಡಿ ಆನೇಕಲ್ ಕ್ಷೇತ್ರ ಜೆಡಿಎಸ್ ಭದ್ರಕೋಟೆ ಯಾಗಿತ್ತು ಆದರೆ ಕೆಲವು ಕಾರಣಗಳಿಂದ ಪಕ್ಷ ಸೋಲನ್ನು ಕಾಣಬೇಕಾಯಿತು ಆಧರೆ ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯ ಹಾಗೂ ತಾಲ್ಲೂಕಿನಲ್ಲಿ ಮತದಾರ ಒಲವು ಜೆಡಿಎಸ್ ಪರವಿದ್ದು ಈ ಬಾರಿ ಆನೇಕಲ್ ಕ್ಷೇತ್ರ ಜೆಡಿಎಸ್ ತೆಕ್ಕೆಗೆ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಜೆಡಿಎಸ್ ಯುವ ಮುಖಂಡ ಕೆ.ಪಿ.ರಾಜು ಮಾತನಾಡಿ ಜೆಡಿಎಸ್ ಕಾರ್ಯಕರ್ತರನ್ನು ಹಗುರವಾಗಿ ಮಾತನಾಡುವ, ಟೀಕಿಸುವ ಯಾವುದೇ ನೈತಿಕತೆ ಬಿಜೆಪಿ ಹಾಗೂ ಕಾಂಗ್ರೆಸ್ ರವರಿಗೆ ಇಲ್ಲ, ನಿಮ್ಮುಗಳ ತಾಕತ್ ವಿಧಾನ ಸಭಾ ಚುನಾವಣೆಯ ಪಲಿತಾಂಶ ತೋರಿಸಿ ಅಂದು ಗೊತ್ತಾಗುತ್ತದೆ ಯಾರು ಶಕ್ತಿವಂತರು, ಅಸಮರ್ಥರು ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದರು.
ಇದೇ ಸಂಧರ್ಭದಲ್ಲಿ ನೂರಕ್ಕೂ ಹೆಚ್ಚು ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪಕ್ಷವನ್ನು ತೊರೆದು ಜೆಡಿಎಸ್ ಗೆ ಸೇರ್ಪಡೆ ಗೊಂಡರು ಜೊತೆಗೆ ಪದಾದಿಕಾರಿಗಳಿಗೆ ವಿವಿಧ ಹಂತದ ಜವಬ್ದಾರಿ ಪತ್ರಗಳನ್ನು ವಿತರಿಸಿದರು.
ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ದೇವೇಗೌಡ, ಜೆಡಿಎಸ್ ಮುಖಂಡರಾದ ಶ್ರೀನಾಥ್ ರೆಡ್ಡಿ, ರಾಮೇಗೌಡ, ರಾಜಣ್ಣ, ಆರ್.ದೇವರಾಜ್, ಯಲ್ಲಮ್ಮ ಪಾಳ್ಳ ರವಿ, ಚಂದಾಪುರ ಆನಂದ್, ಜಿಮ್ ಸುರೇಶ್, ಅತ್ತಿಬೆಲೆ ಸೂರಿ, ರಾಮಚಾರಿ, ಸಜರ್ಾಪುರ ನಾಗೇಶ್, ಶಿವಪ್ಪ, ಭೂಮಿ ರೆಡ್ಡಿ ಮತ್ತಿತರು ಹಾಜರಿದ್ದರು.
ಚಿತ್ರ ಇದೆ.
ಆನೇಕಲ್ ಪಟ್ಟಣದ ಸೌಭಾಗ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ತೊರೆದು ಬಂದ ರಮೇಶ್ ಮತ್ತು ಅವರ ಸಂಗಡಿಗರನ್ನು ಗೊಟ್ಟಿಗೆರೆ ಮಂಜಣ್ಣ ಜೆಡಿಎಸ್ ಸೇರ್ಪಡೆ ಮಾಡಿಕೊಂಡರು.