ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ನೊಸೆನೂರಿನ ವಿ.ಮಂಜುನಾಥ್ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ದೊಡ್ಡಹಾಗಡೆ ಎನ್,ಶಂಕರ್ ಅವಿರೋಧವಾಗಿ ಆಯ್ಕೆಯಾದರು,
ಸ್ಥಳೀಯ ಸುದ್ದಿ
| 13 Oct 2018 08:52 am

ಆನೇಕಲ್. ಅ. 13- ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ನೊಸೆನೂರಿನ ವಿ.ಮಂಜುನಾಥ್ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ದೊಡ್ಡಹಾಗಡೆ ಎನ್,ಶಂಕರ್ ಅವಿರೋಧವಾಗಿ ಆಯ್ಕೆಯಾದರು,
ನೂತನ ಅಧ್ಯಕ್ಷ ವಿ.ಮಂಜುನಾಥರೆಡ್ಡಿ ಮಾತನಾಡಿ ರೈತರ ಪರವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಸಂಘದ ಮೂಲಕ ಉತ್ತಮ ಕಾರ್ಯಕ್ರಮ ರೂಪಿಸಲಾಗುವುದು 15 ವರ್ಷಗಳ ಅಧ್ಯಕ್ಷರಾಗಿದ್ದ ಎನ್.ಬಿ.ಐ. ನಾಗರಾಜು ಅವರ ಮಾರ್ಗದರ್ಶನದಲ್ಲಿ ಸಂಘ ನಡೆದಿದೆ ಅದೇ ಹಾದಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದು ಹೇಳಿದರು.
ಉಪಾಧ್ಯಕ್ಷ ದೊಡ್ಡಹಾಗಡೆ ಎನ್,ಶಂಕರ್ ಮಾತನಾಡಿ ರಾಜಕೀಯ ರಹಿತವಾದ ಸಹಕಾರಿ ಸಂಘದಲ್ಲಿ ಎಲ್ಲಾ ಪಕ್ಷಗಳ ಚುನಾಯಿತ ಪ್ರತಿನಿಧಿಗಳು ಒಗ್ಗೂಡಿ ಅವಿರೋದವಾಗಿ ಆಯ್ಕೆಯಾಗಿರುವುದು ಉತ್ತಮ ಬೆಳವಣಿಗೆ ಮುಂದಿನ ದಿನಗಳಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಸಂಘವನ್ನು ಅಭಿವೃಧ್ಧಿ ಮಾಡುವ ಮೂಲಕ ರೈತರ ಸಮಸ್ಯೆಗಳಿಗೆ ಸ್ವಂದಿಸಲಾಗುವುದು ಎಂದು ಹೇಳಿದರು.
ನಿರ್ಗಮಿತ ಅಧ್ಯಕ್ಷ ಎನ್.ಬಿ,ಐ. ನಾಗಾರಾಜು ಮಾತನಾಡಿ ಸಂಘದ ಹೆಸರಿನಲ್ಲಿ 15 ಸಾವಿರ ಅಡಿಗೂ ಹೆಚ್ಚು ಜಾಗ ಪಟ್ಟಣದ ಹೃದಯ ಭಾಗದಲ್ಲಿದೆ, ಈ ಜಾಗವನ್ನು ಬಳಿಸಿಕೊಂಡು ಶಾಸಕರ ಅನುದಾನದಿಂದ ಅಂಗಡಿ ಮಳಿಗೆಗಳನ್ನು ಕಟ್ಟಲಾಗಿದೆ ನೂತನ ಸಂಘ ಎಲ್ಲರ ಸಹಕಾರ ಪಡೆದು ರೈತರಿಗಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಬಮೂಲ್ ಅಧ್ಯಕ್ಷ ಬಿ.ಜಿ, ಅಂಜೀನಪ್ಪ, ಹಾರಗದ್ದೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಸ್,ನಟರಾಜ್, ಹಾ,ವೇ, ವೆಂಕಟೇಶ್, ಸಿ.ಕೆ, ಚಿನ್ನಪ್ಪ, ಜಿ, ಗೋಪಾಲ್,ವನೊಸೆನೂರು ಸಿ,ಎನ್,ರವಿಚಂದ್ರ, ನಿದರ್ೇಶಕರಾದ ಎಸ್.ಕೆ.ಮುನಿರಾಜು. ಎಸ್.ಕೆ.ಮುನಿರಾಜು, ವಿ.ರವಿಕುಮಾರ್, ಪಿ,ರಾಜು, ಎಂ,ರಾಮಚಂದ್ರರೆಡ್ಡಿ. ಹೇಮಲತಾ ಆಂಜಿನಪ್ಪ.ಕ ಕೆ,ಎ,ರೂಪಾ. ಆರ್, ರೂಪಾ, ಬಿ,ವೆಂಕಟೇಶಪ್ಪ, ಎ,ಅಶೋಕ್, ವೆಂಕಟಸ್ವಾಮಪ್ಪ, ಕೃಷ್ಣಪ್ಪ, ಇದ್ದರು,