6 ವರ್ಷ ಮಾಡಿದ್ನಲ್ಲಾ.. ಬಿಜೆಪಿಯವರಿಗೆ ಹೊಟ್ಟೆಕಿಚ್ಚು

ರಾಜಕೀಯ | 20 Nov 2017 03:30 pm
6 ವರ್ಷ ಮಾಡಿದ್ನಲ್ಲಾ.. ಬಿಜೆಪಿಯವರಿಗೆ ಹೊಟ್ಟೆಕಿಚ್ಚು ಮಂಡ್ಯ: 'ಸಿದ್ದರಾಮಯ್ಯ 5 ವರ್ಷ ಆಡಳಿತ ಪೂರೈಸಿದ್ದಾನಲ್ಲ
ಎಂದು ಬಿಜೆಪಿ ನಾಯಕರಿಗೆ ಹೊಟ್ಟೆಕಿಚ್ಚು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾಗಮಂಗಲದಲ್ಲಿ ಕಾಂಗ್ರೆಸ್‌ ಸಮಾವೇಶವನ್ನುದ್ದೇಶಿಸಿ ಮಾತನಾಡಿದ

ಸಿಎಂ 'ಈಶ್ವರಪ್ಪ ಇದ್ದಾನೆ ಅವ ಬುದ್ದಿ ಹೀನ, ಯಡಿಯೂರಪ್ಪ ಅಂತ ಇದ್ದಾನೆ ಅವನೂ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಇದ್ದಾನೆ ಅವನಿಗೆ ಹೇಗೆ
ಮಾತನಾಡಬೇಕೆಂಬುದೇ ಗೊತ್ತಿಲ್ಲ, ಪಾರ್ಲಿಮೆಂಟರಿ ಲ್ಯಾಂಗ್ವೇಜ್‌ ಗೊತ್ತಿಲ್ಲ. ಅನಾಗರಿಕ ಮಾತುಗಳನ್ನಾಡುತ್ತಾನೆ' ಎಂದರು. 'ಬಿಜೆಪಿಯವರು ಹೀಗೆ ಮಾತನಾಡುವುದು ಯಾಕೆ ಗೊತ್ತಾ ? ಅವರಿಗೆ ಹೊಟ್ಟೆಕಿಚ್ಚು . ಸಿದ್ದರಾಮಯ್ಯ 5 ವರ್ಷ ಆಡಳಿತ ಪೂರ್ಣ ಮಾಡಿದನಲ್ಲಾ ಎಂದು. ಅವರ ಹೊಟ್ಟೆ ಕಿಚ್ಚು

ಅವರನ್ನೇ ಸುಡುತ್ತದೆ. ನನಗೆ ರಾಜ್ಯದ ಜನ ಆಶೀರ್ವಾದ ಮಾಡುತ್ತಾರೆ'ಎಂದರು. 'ನಾನು ಬಿಜೆಪಿ ನಾಯಕರ ಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ. ನನಗೂ ಹಳ್ಳಿ ಭಾಷೆಯಲ್ಲಿ ಬೈಯಲು ಬರುತ್ತದೆ ಆದರೆ ಹಾಗೆ ಮಾತನಾಡುವುದಿಲ್ಲ' ಎಂದರು.

Other News :

keyboard_arrow_right ಅಭಿವೃದ್ದಿಗೆ ಒತ್ತು- ತಾಲ್ಲೂಕು ಪಂಚಾಯಿತಿ ಸದಸ್ಯೆ ಉಮಾದೇವಿ ಆನಂದರೆಡ್ಡಿ keyboard_arrow_right ಮಕ್ಕಳ ರಕ್ಷಣೆಗೆ ಜಾಥ keyboard_arrow_right ಪದವೀದರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೆಣಸಲು ಸಾಧ್ಯವಾಗದೆ ವಿರೋದ ಪಕ್ಷದ ನಾಯಕರುಗಳು ಕುತಂತ್ರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಮೋಜಿಗೌಡರು ತಿಳಿಸಿದರು keyboard_arrow_right "ಕಾಲ್ನಡಿಗೆ ಮೂಲಕ ಬಂದು ದೇವರ ದರ್ಶನ ಪಡೆದ ರಾಮಸಾಗರ ಗ್ರಾಮಸ್ಥರು" ವೈಕುಂಠ ಏಕಾದಶಿ ಅಂಗವಾಗಿ ಆನೇಕಲ್ ವಿಧಾನ ಸಭಾ ಕ್ಷೇತ್ರದ ರಾಮಕೃಷ್ಣಾಪುರದ ಪ್ರಸನ್ನ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು. keyboard_arrow_right ಆನೇಕಲ್ ವಿದಾನ ಸಭಾ ಕ್ಷೇತ್ರದ ಅತ್ತಿಬೆಲೆಯ ಜಯಭಾರತಿ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು keyboard_arrow_right ಸಾಯಿ ಬಾಬ ದೇವಾಲಯವನ್ನು ಸರ್ಕಾರದ ಸುಪದ್ದಿಗೆ ತೆಗೆದುಕೊಳ್ಳಬೇಕು ಗ್ರಾಮಸ್ಥರ ಆಗ್ರಹ keyboard_arrow_right ಆನೇಕಲ್ ವಿಧಾನ ಸಭಾಕ್ಷೇತ್ರದ ಗೆಸ್ಟ್ ಲೈನ್ ಸಮೀಪದಲ್ಲಿ ನೂತನವಾಗಿ ಶ್ರೀ ಸಾಯಿ ಅಸ್ಪತ್ತೆಗೆ ಚಾಲನೆ keyboard_arrow_right ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಕೊಂಡ ಶಾಸಕ ಸತೀಶ್ ರೆಡ್ಡಿ

Related News :

ಧರ್ಮವೆಂದರೆ ಜೀವನ ವಿಧಾನ

Posted @ 21 Nov 2017, 03:41 pm
ಭಾರತದ ಮಣ್ಣಿನ ಕಣಗಳಲ್ಲಿ ಧರ್ಮ, ಸಂಸ್ಕೃತಿ, ಪರಂಪರೆಯ ಬೇರುಗಳು ಆಳವಾಗಿ ಬೆಳೆದು ಭದ್ರಗೊಂಡಿವೆ. ಭಾರತೀಯರು ದೇವರನ್ನು ಪ್ರೀತಿಸುವ ವಿಚಾರ ವಿಶ್ವತೋಮುಖಗೊಂಡಿದೆ. ಭಾರತೀಯರು ದೇವರನ್ನು ಪ್ರೀತಿಸುತ್ತಾರೆ; ಅದಕ್ಕೆ ನಾವು ಭಾರತೀಯರನ್ನು ಪ್ರೀತಿಸುತ್ತೇವೆ ಎಂಬ ಜರ್ಮನ್‌ ದೇಶದ ಮಗು ನಮ್ಮ ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್‌...

ಕುಖ್ಯಾತ ಸರಣಿ ಹಂತಕ, ಕಲ್ಟ್ ಲೀಡರ್‌ ಮ್ಯಾನ್‌ಸನ್‌ ಇನಿಲ್ಲ

Posted @ 20 Nov 2017, 05:08 pm
ವಾಷಿಂಗ್ಟನ್‌ : ತನ್ನ ಯುವ ಹಿಂಬಾಲಕರನ್ನು ಮುಂದಿಟ್ಟುಕೊಂಡು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 1960ರ ದಶಕದ ಕೊನೆಯಲ್ಲಿ ಸರಣಿ ಹತ್ಯೆಗಳನ್ನು ನಡೆಸಿ ಜನ ಸಮೂಹದಲ್ಲಿದ್ದ ಶಾಂತಿ ಮತ್ತು ಪ್ರೀತಿಯ ಮೌಲ್ಯಗಳನ್ನು ಹೊಸಕಿ ಹಾಕಿ ಜನರ ನಿದ್ದೆಗೆಡಿಸಿದ್ದ ಕ್ರೂರ ಕಂಗಳ ಕುಖ್ಯಾತ ಸರಣಿ ಹಂತಕ, ಕಲ್ಟ್...