ಕುಖ್ಯಾತ ಸರಣಿ ಹಂತಕ, ಕಲ್ಟ್ ಲೀಡರ್‌ ಮ್ಯಾನ್‌ಸನ್‌ ಇನಿಲ್ಲ

ರಾಜಕೀಯ | 20 Nov 2017 05:08 pm
ಕುಖ್ಯಾತ ಸರಣಿ ಹಂತಕ, ಕಲ್ಟ್ ಲೀಡರ್‌ ಮ್ಯಾನ್‌ಸನ್‌ ಇನಿಲ್ಲ ವಾಷಿಂಗ್ಟನ್‌ : ತನ್ನ ಯುವ ಹಿಂಬಾಲಕರನ್ನು ಮುಂದಿಟ್ಟುಕೊಂಡು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 1960ರ ದಶಕದ ಕೊನೆಯಲ್ಲಿ ಸರಣಿ ಹತ್ಯೆಗಳನ್ನು ನಡೆಸಿ ಜನ ಸಮೂಹದಲ್ಲಿದ್ದ ಶಾಂತಿ ಮತ್ತು ಪ್ರೀತಿಯ ಮೌಲ್ಯಗಳನ್ನು ಹೊಸಕಿ ಹಾಕಿ ಜನರ ನಿದ್ದೆಗೆಡಿಸಿದ್ದ ಕ್ರೂರ ಕಂಗಳ ಕುಖ್ಯಾತ ಸರಣಿ ಹಂತಕ, ಕಲ್ಟ್ ಲೀಡರ್‌, ಚಾರ್ಲ್ಸ್‌ ಮ್ಯಾನ್‌ಸನ್‌ ತನ್ನ 83ರ ಹರೆಯದಲ್ಲಿ ಮೃತಪಟ್ಟನೆಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ಧಕ್ಯ ಸಹಜ ದೈಹಿಕ ತೊಂದರೆಗಳಿಂದ ಬಳಲುತ್ತಿದ್ದ ಮ್ಯಾನ್‌ಸನ್‌ ನಿನ್ನೆ ಭಾನುವಾರ ಸಂಜೆ ಕರ್ನ್ ಕೌಂಟಿ ಆಸ್ಪತ್ರೆಯಲ್ಲಿ ಮೃತಪಟ್ಟನೆಂದು ಕ್ಯಾಲಿಫೋರ್ನಿಯದ ಅಪರಾಧಿಗಳ ಸುಧಾರಣಾ ಮತ್ತು ಪುನರ್‌ವಸತಿ ಇಲಾಖೆ ತಿಳಿಸಿದೆ. ಆದರೆ ಮ್ಯಾನ್‌ಸನ್‌ ಸಾವಿನ ಸನ್ನಿವೇಶಗಳ ವಿವರಗಳನ್ನು ಅದು ಬಹಿರಂಗಪಡಿಸಿಲ್ಲ.

ಮ್ಯಾನ್‌ಸನ್‌ ಸಮೀಪದ ಕಾರ್ಕೋರಾನ್‌ ರಾಜ್ಯ ಬಂಧೀಖಾನೆಯಲ್ಲಿ ಜೀವಾವಧಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದ. ನಟಿ ಶ್ಯಾರನ್‌ ಟೇಟ್‌ ಸೇರಿದಂತೆ 9 ಮಂದಿಯನ್ನು ನಿಷ್ಕರುಣೆಯಿಂದ ಕೊಲೆಗೈದ ಅಪರಾಧವನ್ನು ಆತ ಎಸಗಿದ್ದ.

1969ರ ವೈಶಾಖದಲ್ಲಿ ಮ್ಯಾನ್‌ಸನ್‌ ಸರಣಿ ಹತ್ಯೆ ನಡೆಸಿ ಜನಮನದಲ್ಲಿ ಪ್ರಾಣ ಭೀತಿಯನ್ನು ಸೃಷ್ಟಿಸಿ ಎಲ್ಲರಿಗೂ ಯಮಸ್ವರೂಪಿಯಾಗಿದ್ದ.ಇಂದಿಗೂ ಆತನ ಹೆಸರು ನಿರ್ದಯ ಹತ್ಯೆಯ ಪ್ರತೀಕವಾಗಿ ಜನಮಾನಸದಲ್ಲಿ ಭೀತಿಯ ಕರಾಳ ಛಾಯೆಯನ್ನು ಶಾಶ್ವತವಾಗಿ ಉಳಿಸಿದೆ.

Other News :

keyboard_arrow_right ಹನುಮ ಜಯಂತಿ ಉತ್ಸವಕ್ಕೆ ಶ್ರೀ ಡಾ|| ರಾಮಚಂದ್ರಾ ಸ್ವಾಮಿಗಳು ಭಾಗಿ keyboard_arrow_right "ಕಾಲ್ನಡಿಗೆ ಮೂಲಕ ಬಂದು ದೇವರ ದರ್ಶನ ಪಡೆದ ರಾಮಸಾಗರ ಗ್ರಾಮಸ್ಥರು" ವೈಕುಂಠ ಏಕಾದಶಿ ಅಂಗವಾಗಿ ಆನೇಕಲ್ ವಿಧಾನ ಸಭಾ ಕ್ಷೇತ್ರದ ರಾಮಕೃಷ್ಣಾಪುರದ ಪ್ರಸನ್ನ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು. keyboard_arrow_right ಜಿಗಣಿಯಲ್ಲಿ ಉಚಿತ ನೇತ್ರಾ ತಪಾಸಣಾ ಶಿಭಿರ keyboard_arrow_right ಅಭಿವೃದ್ದಿಗೆ ಒತ್ತು- ತಾಲ್ಲೂಕು ಪಂಚಾಯಿತಿ ಸದಸ್ಯೆ ಉಮಾದೇವಿ ಆನಂದರೆಡ್ಡಿ keyboard_arrow_right ಬಿಜೆಪಿರವರು ಭ್ರಷ್ಠಾಚಾರದ ಬಗ್ಗೆ ರುಜುವಾತು ಮಾಡಿದರೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಶಾಸಕ ಬಿ.ಶಿವಣ್ಣ ಹೇಳಿದರು keyboard_arrow_right ಗುಜರಾತ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು ಅದರ ಪೂರಕವಾಗಿ ಚಂದಾಪುರ ವೃತ್ತದಲ್ಲಿ ಮಾಜಿ ಸಚಿವ ಎ.ನಾರಾಯಣಸ್ವಾಮಿ ಹಾಗೂ ತಾಲ್ಲೂಕು ಅಧ್ಯಕ್ಷ ಕೆ.ವಿ.ಶಿವಪ್ಪ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರಿಗೆ ಸಿಹಿ ಹಂಚಿ.ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು keyboard_arrow_right ಡಿ. 09ರಂದು ಆನೇಕಲ್ ಪಟ್ಟಣದಲ್ಲಿ ಏತನೀರಾವರಿ ಯೋಜನೆ, ಕಾವೇರಿ ನೀರು ಪೂರೈಕೆ ಸೇರಿದಂತೆ ಅನೇಕ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಚಾಲನೆ ನೀಡಲಿದ್ದಾರೆ ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು. keyboard_arrow_right ಡಿ.02 ರಂದು ಪಟ್ಟಣದ ಸೌಭಾಗ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಜೆಡಿಎಸ್ ಪಕ್ಷದ ತಾಲ್ಲೂಕು ಮಹಾಪ್ರಧಾನ ಕಾರ್ಯದರ್ಶಿ ಆರ್.ದೇವರಾಜ್ ತಿಳಿಸಿದ್ದಾರೆ

Related News :

ಧರ್ಮವೆಂದರೆ ಜೀವನ ವಿಧಾನ

Posted @ 21 Nov 2017, 03:41 pm
ಭಾರತದ ಮಣ್ಣಿನ ಕಣಗಳಲ್ಲಿ ಧರ್ಮ, ಸಂಸ್ಕೃತಿ, ಪರಂಪರೆಯ ಬೇರುಗಳು ಆಳವಾಗಿ ಬೆಳೆದು ಭದ್ರಗೊಂಡಿವೆ. ಭಾರತೀಯರು ದೇವರನ್ನು ಪ್ರೀತಿಸುವ ವಿಚಾರ ವಿಶ್ವತೋಮುಖಗೊಂಡಿದೆ. ಭಾರತೀಯರು ದೇವರನ್ನು ಪ್ರೀತಿಸುತ್ತಾರೆ; ಅದಕ್ಕೆ ನಾವು ಭಾರತೀಯರನ್ನು ಪ್ರೀತಿಸುತ್ತೇವೆ ಎಂಬ ಜರ್ಮನ್‌ ದೇಶದ ಮಗು ನಮ್ಮ ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್‌...

6 ವರ್ಷ ಮಾಡಿದ್ನಲ್ಲಾ.. ಬಿಜೆಪಿಯವರಿಗೆ ಹೊಟ್ಟೆಕಿಚ್ಚು

Posted @ 20 Nov 2017, 03:30 pm
ಮಂಡ್ಯ: 'ಸಿದ್ದರಾಮಯ್ಯ 5 ವರ್ಷ ಆಡಳಿತ ಪೂರೈಸಿದ್ದಾನಲ್ಲ ಎಂದು ಬಿಜೆಪಿ ನಾಯಕರಿಗೆ ಹೊಟ್ಟೆಕಿಚ್ಚು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾಗಮಂಗಲದಲ್ಲಿ ಕಾಂಗ್ರೆಸ್‌ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಸಿಎಂ 'ಈಶ್ವರಪ್ಪ ಇದ್ದಾನೆ ಅವ ಬುದ್ದಿ ಹೀನ, ಯಡಿಯೂರಪ್ಪ ಅಂತ ಇದ್ದಾನೆ...